ಗೂಡ್ಸ್ ಟ್ರೈನ್ ಗೆ ಸಿಲುಕಿ ಸಾಯಬೇಕಿದ್ದ ವ್ಯಕ್ತಿ ಕೂದಲೆಳೆ ಅಂಚಿನಲ್ಲಿ ಪಾರು: ವಿಡಿಯೋ ವೈರಲ್ 
ದೇಶ

ಗೂಡ್ಸ್ ಟ್ರೈನ್ ಗೆ ಸಿಲುಕಿ ಸಾಯಬೇಕಿದ್ದ ವ್ಯಕ್ತಿ ಕೂದಲೆಳೆ ಅಂಚಿನಲ್ಲಿ ಪಾರು: ವಿಡಿಯೋ ವೈರಲ್

ಸರಕು ಸಾಗಣೆ ರೈಲು ತನ್ನ ಮೇಲೆ ಹರಿದುಹೋಗುವುದರಿಂದ ಕೂದಲೆಳೆ ಅಂಚಿನಲ್ಲಿ ಪಾರಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಅನಂತಪುರ: ಸರಕು ಸಾಗಣೆ ರೈಲು ತನ್ನ ಮೇಲೆ ಹರಿದುಹೋಗುವುದರಿಂದ ಕೂದಲೆಳೆ ಅಂಚಿನಲ್ಲಿ ಪಾರಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 
ಅನಂತ ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಲಖನೌ-ಯಶವಂತಪುರ ರೈಲು ಹೊರಟ ನಂತರ ವ್ಯಕ್ತಿಯೋರ್ವ ಪ್ಲಾಟ್ ಫಾರ್ಮ್ 2 ರಿಂದ 1 ಕ್ಕೆ ಹೋಗಬೇಕಾದರೆ ಮೇಲ್ಸೇತುವೆ ಬಳಕೆ ಮಾಡದೇ ಹಾಗೆಯೇ ಹಳಿ ದಾಟುವಾಗ  ಗೂಡ್ಸ್ ರೈಲು ಸಹ ಅದೇ ಪ್ಲಾಟ್ ಫಾರ್ಮ್ ನಲ್ಲಿ ಹೊರಟಿದೆ. ಆದರೆ ಧೈರ್ಯಗೆಡದ ವ್ಯಕ್ತಿ ಹಳಿಯ ಮೇಲೆ ಅಪಾಯವಾಗದಂತೆ ಮಲಗಿದ್ದಾರೆ. ರೈಲು ಹೋದ ನಂತರ ಎದ್ದು ಆರಾಮಾಗಿ ಹೆಜ್ಜೆ ಹಾಕಿದ್ದಾರೆ. ಈ ಘಟನೆಯನ್ನು ವ್ಯಕ್ತಿಯೋರ್ವರು ವಿಡಿಯೋ ಮಾಡಿಕೊಂಡಿದ್ದು ಈಗ ಆ ವಿಡಿಯೋ ವೈರಲ್ ಆಗಿದೆ. 
ಹತ್ತಿರ ಹತ್ತಿರ 1 ನಿಮಿಷದ ವರೆಗೂ ವ್ಯಕ್ತಿ ರೈಲು ಹಳಿಗಳ ಮೇಲೆ ಅಪಾಯವಾಗದಂತೆ ಮಲಗಿದ್ದ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. ಪ್ರಯಾಣಿಕ ರೈಲು ಹಳಿಯನ್ನು ದಾಟುವುದಕ್ಕೆ ಫುಟ್ ಓವರ್ ಬ್ರಿಡ್ಜ್ ನ್ನು ಬಳಕೆ ಮಾಡದೇ ಇರುವುದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!